ಕನ್ನಡ ನಾಡು | Kannada Naadu

ನಟ ಕಮಲ್‍ಗೆ ಸುಪ್ರೀಂನಲ್ಲಿ ಹಿನ್ನಡೆ

09 Jun, 2025

ನವದೆಹಲಿ : ಕಮಲ್ ಹಾಸನ್ ನಟಿಸಿದ ಇತ್ತೀಚಿನ ಚಿತ್ರ `ಥಗ್ ಲೈಫ್’ ಪ್ರದರ್ಶನವನ್ನು ವಿರೋಧಿಸುವ ಗುಂಪುಗಳಿಂದ ಬರುವ ಬೆದರಿಕೆಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.


ಕರ್ನಾಟಕ ಥಿಯೇಟರ್ಸ್ ಅಸೋಸಿಯೇಷನ್, ಆರ್ಟಿಕಲ್ 32 ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಚಿತ್ರವನ್ನು ಪ್ರದರ್ಶಿಸಲು ಇಚ್ಛಿಸುವ ಕರ್ನಾಟಕದ ಚಿತ್ರಮಂದಿರಗಳಿಗೆ ಕೆಲವು ಉಗ್ರಗಾಮಿ ಶಕ್ತಿಗಳು ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಪರಿಹಾರಕ್ಕಾಗಿ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಅರ್ಜಿದಾರರು ಈ ಹಿಂದೆ ಹೈಕೋರ್ಟ್‍ಗೆ ಬಂದಾಗ, ಬೆದರಿಕೆಗಳನ್ನು ನೀಡುವ ಅಂಶಗಳೊಂದಿಗೆ ರಾಜಿ ಮಾಡಿಕೊಳ್ಳಲು ಸೂಚಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.


ಇತ್ತೀಚೆಗೆ ಥಗ್ ಲೈಫ್ ಸಿನಿಮಾ ಈವೆಂಟ್‍ನಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿಗೆ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಭಾರೀ ವಿವಾದ ಸೃಷ್ಟಿಯಾಗಿದೆ. ತಮಿಳು ಕನ್ನಡ ಭಾಷೆಗಳು ದ್ರಾವಿಡಿಯನ್ ಭಾಷೆಗಳಾಗಿದ್ದರೂ ಎರಡೂ ವಿಭಿನ್ನ ಶೈಲಿಗಳನ್ನು ಹೊಂದಿದ್ದು, ಸಂಪೂರ್ಣ ಬೇರೆ ಬೇರೆಯಾಗಿವೆ. ಆದರೆ, ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದಾಗ್ಯೂ ಕ್ಷಮೆ ಕೇಳದೇ ಮೊಂಡು ವಾದವನ್ನು ನಿಜವೆಂದು ಹೇಳುವ ಪ್ರಯತ್ನ ಮಾಡಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by