ಕನ್ನಡ ನಾಡು | Kannada Naadu

ಯಾವುದೇ ಕ್ಷಣದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ: ಸತೀಶ್ ಜಾರಕಿಹೊಳಿ

05 Jun, 2025

ಬೆಳಗಾವಿ: ಜಿಲ್ಲಾ ವಿಭಜನೆಯಾಗಲಿ ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆಗೊಳಿಸಿ ಮೂರು ಜಿಲ್ಲೆಯನ್ನಾಗಿಸಬೇಕಿದೆ. ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು. ಜಿಲ್ಲಾ ವಿಭಜನೆ ಘೋಷಣೆಯನ್ನು ಯಾವ ಸಂದರ್ಭದಲ್ಲಾದರೂ ಘೋಷಣೆ ಮಾಡಬಹುದು. ಆದರೆ, ಅದು ಪೂರ್ಣಪ್ರಮಾಣದಲ್ಲಿ ಜಾರಿಯಾಗಬೇಕಾದರೆ ಐದು ವರ್ಷ ಅವಧಿಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮೂರು ಜಿಲ್ಲೆಯನ್ನಾಗಿ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಬೇಕು.

ಜೆ.ಎಚ್‌.ಪಟೇಲ್‌ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ವಿಭಜಿಸಿ, ಚಿಕ್ಕೋಡಿ ಮತ್ತು ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಿಸಿ, ಗೆಜೆಟ್‌ ಹೊರಡಿಸಲಾಗಿತ್ತು. ಆಗ ಆಭಾಗದ ಜನರು ಸಂಭ್ರಮಾಚರಣೆ ಮಾಡಿದ್ದರು. ಆದರೆ, ಅದನ್ನು ರದ್ದುಗೊಳಿಸಲಾಯಿತು ರಾಜ್ಯದ ವಿವಿಢೆದೆ ಒಟ್ಟು 42 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಪೈಕಿ 27 ಕಾಮಗಾರಿ ಪೂರ್ಣಗೊಂಡಿವೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.


ನಗರದ ವಾರ್ತಾ ಭವನದಲ್ಲಿ ಬುಧವಾರ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 27 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ, ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಇನ್ನು 15 ಕಾಮಗಾರಿ ಬಾಕಿ ಉಳಿದಿವೆ ಎಂದರು.

Publisher: ಕನ್ನಡ ನಾಡು | Kannada Naadu

Login to Give your comment
Powered by