ಕನ್ನಡ ನಾಡು | Kannada Naadu

ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಸಿಕ್ಕ ಬಹುಮಾನ ಎಷ್ಟು..?

04 Jun, 2025

ಬೆಂಗಳೂರು:   18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಐಪಿಎಲ್‌ ಟ್ರೋಫಿ ಗೆದ್ದ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್‌ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ.

ಗೆದ್ದ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ (Prize Money) ಇದ್ದರೆ, ರನ್ನರ್‌ ಅಪ್‌ ಆದ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಬಹುಮಾನಕ್ಕಿಂತ ಹೆಚ್ಚಿನ ಹಣಕ್ಕೆ ಹಲವು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿವೆ. ಬಹುಮಾನ ಹಲವು ಮಾರ್ಗದ ಮೂಲಕ ಹಣವನ್ನು ಸಂಪಾದಿಸುತ್ತವೆ. ಅದರಲ್ಲೂ ಐಪಿಎಲ್‌ ಗೆದ್ದ ತಂಡ ಸ್ವಲ್ಪ ಜಾಸ್ತಿಯೇ ಹಣವನ್ನು ಗಳಿಸಲಿದೆ. ಈ ಮಧ್ಯೆ ಕೆಲವರು ವೈಯಕ್ತಿಕ ಪ್ರಶ್ತಿಗಳನ್ನೂ ಬಾಚಿಕೊಂಡಿದ್ದಾರೆ. ಅವುಗಳ ಪಟ್ಟಿಯನ್ನೊಮ್ಮೆ ನೋಡಿಬಿಡೋಣ…

 

ಪ್ರಶಸ್ತಿ ವಿಜೇತರು ಮತ್ತು ಬಹುಮಾನ ಪಡೆದ ಲಿಸ್ಟ್‌ ಇಲ್ಲಿದೆ..

ಚಾಂಪಿಯನ್ಸ್‌ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಕೋಟಿ ರೂ.
ರನ್ನರ್ಸ್ ಅಪ್ – ಪಂಜಾಬ್ ಕಿಂಗ್ಸ್ – 12.5 ಕೋಟಿ ರೂ.
ಆರೆಂಜ್ ಕ್ಯಾಪ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಪರ್ಪಲ್ ಕ್ಯಾಪ್ – ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಮೋಸ್ಟ್‌ ವ್ಯಾಲ್ಯುಯೆಬಲ್‌ ಪ್ಲೇಯರ್‌ – ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್) – 15 ಲಕ್ಷ ರೂ.
ಆವೃತ್ತಿಯ ಸೂಪರ್ ಸ್ಟ್ರೈಕರ್ – ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 10 ಲಕ್ಷ ರೂ. + ಟಾಟಾ ಕರ್ವ್
ಹೆಚ್ಚಿನ ಡಾಟ್ ಬಾಲ್ – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಉದಯೋನ್ಮುಖ ಆಟಗಾರ (ಎಮರ್ಜಿಂಗ್‌ ಪ್ಲೇಯರ್‌) – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಸೂಪರ್ ಸಿಕ್ಸರ್ಸ್‌ – ನಿಕೋಲಸ್ ಪೂರನ್ (ಲಕ್ನೋ ಸೂಪರ್ ಜೈಂಟ್ಸ್) – 10 ಲಕ್ಷ ರೂ.
ಸಿರೀಸ್‌ನಲ್ಲಿ ಅತಿಹೆಚ್ಚು ಫೋರ್ಸ್‌ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಕ್ಯಾಚ್‌ ಆಫ್‌ ದಿ ಸೀಸನ್‌ – ಕಮಿಂಡು ಮೆಂಡಿಸ್ (ಸನ್‌ರೈಸರ್ಸ್ ಹೈದರಾಬಾದ್) – 10 ಲಕ್ಷ ರೂ.
ಫೇರ್‌ಪ್ಲೇ ಪ್ರಶಸ್ತಿ – ಚೆನ್ನೈ ಸೂಪರ್ ಕಿಂಗ್ಸ್ – 10 ಲಕ್ಷ ರೂ.
ಪಿಚ್ ಮತ್ತು ಗ್ರೌಂಡ್ – ಡಿಡಿಸಿಎ (ಡೆಲ್ಲಿ ಕ್ಯಾಪಿಟಲ್ಸ್‌ ಹೋಮ್ ಗ್ರೌಂಡ್) – 50 ಲಕ್ಷ ರೂ.

 

ಆರ್‌ಸಿಬಿ vs ಪಂಜಾಬ್‌ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದವರು ಇವರೇ…
ಪಂದ್ಯ ಶ್ರೇಷ್ಠ ಪ್ರಶಸ್ತಿ – ಕೃನಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 5 ಲಕ್ಷ ರೂ.
ಸೂಪರ್ ಸ್ಟ್ರೈಕರ್ – ಜಿತೇಶ್ ಶರ್ಮಾ – 1 ಲಕ್ಷ ರೂ.
ಅತಿ ಹೆಚ್ಚು ಡಾಟ್ ಬಾಲ್ಸ್‌ – ಕೃನಾಲ್ ಪಾಂಡ್ಯ – 1 ಲಕ್ಷ ರೂ.
ಅತಿ ಹೆಚ್ಚು ಫೋರ್‌ಗಳು – ಪ್ರಿಯಾಂಶ್ ಆರ್ಯ – 1 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಶಶಾಂಕ್ ಸಿಂಗ್ – 1 ಲಕ್ಷ ರೂ.
ಅತಿ ಹೆಚ್ಚು ಸಿಕ್ಸರ್ಸ್‌ – ಶಶಾಂಕ್ ಸಿಂಗ್ – 1 ಲಕ್ಷ ರೂ.

ಮೀಡಿಯಾ ರೈಟ್ಸ್‌ನಲ್ಲಿ ಪಾಲು
ಐಪಿಎಲ್ ತಂಡಗಳು ತಮ್ಮ ಆದಾಯದ ಗಣನೀಯ ಭಾಗವನ್ನು ಲೀಗ್‌ನ ಮೀಡಿಯಾ ರೈಟ್ಸ್‌ನಿಂದ ಅಂದ್ರೇ ಪ್ರಸಾರದ ಹಕ್ಕುಗಳಿಂದ ಗಳಿಸುತ್ತವೆ. 2023 ರಿಂದ 2027ರ ಐದು ಐಪಿಎಲ್‌ನ ಮೀಡಿಯಾ ರೈಟ್ಸ್‌ ಅನ್ನು ಬಿಸಿಸಿಐ ಬರೋಬ್ಬರಿ 48,390 ಕೋಟಿ ರೂ.ಗೆ ಮಾರಾಟ ಮಾಡಿದೆ. ಈ ಆದಾಯದಲ್ಲಿ ಸರಿ ಸುಮಾರು 45% ಪಾಲು ಫ್ರಾಂಚೈಸಿಗಳ ಪಾಲಾಗಲಿದೆ. ಈ ಆದಾಯವನ್ನ ತಂಡದ ಪ್ರದರ್ಶನ, ಎಷ್ಟು ಫಾಲೋವರ್ಸ್‌ ಅನ್ನು ಹೊಂದಿದೆ ಎನ್ನುವುದರ ಮೇಲೆ ವಿತರಿಸಲಾಗುತ್ತದೆ. ಲೀಗ್‌ನಲ್ಲೇ ಹೊರಬಿದ್ದ ತಂಡಗಳಿಗೆ ಕಡಿಮೆ ಆದಾಯ ಬಂದ್ರೆ, ಫ್ಲೇಆಫ್‌ ಹಂತದಲ್ಲಿ ಅಭಿಯಾನ ಮುಗಿಸಿದ ತಂಡಗಳು ಅದಕ್ಕಿಂತ ಸ್ವಲ್ಪ ಹೆಚ್ಚು ಪಾಲನ್ನು ಪಡೆಯಲಿವೆ. ಈ ಆದಾಯದಲ್ಲಿ ವಿಜೇತ ತಂಡವೇ ಹೆಚ್ಚಿನ ಪಾಲನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಸ್ಪಾನ್ಸರ್‌ಶಿಪ್‌ ಮತ್ತು ಬ್ರಾಂಡ್‌ ಪಾಲು!
ಇನ್ನೂ ಜೆರ್ಸಿ ಸ್ಪಾನ್ಸರ್‌ಶಿಫ್‌, ಟೈಟಲ್‌ ಸ್ಪಾನ್ಸರ್‌ಶಿಪ್‌ ಹಾಗೂ ಡಿಜಿಟಲ್‌ ಪಾರ್ಟನರ್ಸ್‌ ಸೇರಿ ಹಲವು ವಿಚಾರಕ್ಕೆ ಕಂಪನಿಗಳ ಜೊತೆ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿರುತ್ತದೆ. ಗೆದ್ದ ಬೆನ್ನಲ್ಲೇ ತಂಡದ ಮೌಲ್ಯ ಕೂಡ ವೃದ್ಧಿಯಾಗಲಿದ್ದು, ಹೆಚ್ಚಿನ ಹಣ ಹರಿದುಬರಲಿದೆ. ಮೈದಾನದಲ್ಲಿನ ಯಶಸ್ಸು ತಂಡದ ಬ್ರಾಂಡ್‌ ಮೌಲ್ಯವನ್ನು ಹೆಚ್ಚಿಸುತ್ತದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by