ಕನ್ನಡ ನಾಡು | Kannada Naadu

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ನಗರ ತೋಟಗಾರಿಕೆಗೆ ಉತ್ಕøಷ್ಟ ಕುಂಡ ಮಿಶ್ರಣ ಉದ್ಘಾಟನಾ ಸಮಾರಂಭ

30 May, 2025

 

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನಗರ ತೋಟಗಾರಿಕೆಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ಇದಕ್ಕೆ ಬೇಕಾದ ಅಗತ್ಯ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಹೆಚ್ಚುತ್ತಿದೆ, ಇದನ್ನು ಮನಗಂಡ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಲಯ ಕೃಷಿ ಸಂಶೋಧನಾ ಕೇಂದ್ರ ಉತ್ಕøಷ್ಟ ಕುಂಡ ಮಿಶ್ರಣ ಅಭಿವೃದ್ಧಿಪಡಿಸಿದ್ದು, ನಗರ ತೋಟದ ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮೇ 31 ರಂದು ಬೆಳಿಗ್ಗೆ 11.00 ಗಂಟೆಗೆ ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ವಿಶ್ವÀವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ ಅವರು ಬಿಡುಗಡೆಗೊಳಿಸಲಿದ್ದಾರೆ.

25 ಕೆ.ಜಿ.ನಿವ್ವಳ ತೂಕದ ಈ ಕುಂಡ ಮಿಶ್ರಣ ಚೀಲ, ಕೆಂಪು ಮಣ್ಣು, ಮರುಳು, ಕೊಟ್ಟಿಗೆ ಗೊಬ್ಬರ, ತೆಂಗಿನ ನಾರು, ಎರೆಹುಳು ಗೊಬ್ಬರ, ಪರ್ಲೈಟ್, ವರ್ಮಿಕು ಲೈಟ್, ಸೂಕ್ಷ್ಮ ಜೀವಾಣು ಮಿಶ್ರಣ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಸೋಮವಾರದಿಂದ ಈ ಕುಂಡ ಮಿಶ್ರಣ ಸಂಸ್ಥೆಯ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. 25 ಕೆ.ಜಿ ಒಂದು ಚೀಲದ ಬೆಲೆ ರೂ.150-00 ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by