ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆವರಣೋತ್ಸವ “ಕ್ಷಿತಿಜ-2025”ನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶರವರು ಇಂದು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಖ್ಯಾತ ರಂಗಕರ್ಮಿ, ಚಲನಚಿತ್ರ ನಟಿ ಹಾಗೂ ಗಾಯಕಿ ಪದ್ಮಶ್ರೀ ಶ್ರೀಮತಿ ಬಿ. ಜಯಶ್ರಿ ಹಾಗೂ ಬೆಂಗಳೂರಿನ ಹೆಚ್ಚುವರಿ ಪೋಲೀಸ್ ಆಯುಕ್ತರು (ಅಪರಾಧ) ಡಾ.ಚಂದ್ರಗುಪ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಡೀನ್ ಡಾ. ಎನ್. ಬಿ.ಪ್ರಕಾಶ್, ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೆ ಭಾರತೀಯ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐ.ಎ.ಎಸ್, ಐ.ಪಿ.ಎಸ್.ಮತ್ತು ಐ.ಎಫ್.ಎಸ್ ಸೇವೆಗೆ ಆಯ್ಕೆಯಾಗಿರುವ 4 ಜನ ಕೃಷಿ ಪದವೀಧರರನ್ನು ಸನ್ಮಾನಿಸಲಾಯಿತು ಎಂದು ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾ ತಜ್ಞರು ಮತ್ತು ಮುಖ್ಯಸ್ಥರಾದ ಕೆ.ಪಿ. ರಘುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu