ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಒಟ್ಟು 240 ತಾಲ್ಲೂಕುಗಳಿದ್ದು ಅವುಗಳ ಪೈಕಿ 63 ಹೊಸ ತಾಲ್ಲೂಕುಗಳಾಗಿರುತ್ತದೆ. ಬಹುತೇಕ ಎಲ್ಲಾ ಹೊಸ ತಾಲ್ಲೂಕುಗಳು 2017-2018ನೇ ಸಾಲಿನಿಂದ ರಚನೆಯಾಗಿರುತ್ತವೆ.
“ತಾಲ್ಲೂಕು ಆಡಳಿತಸೌಧ” ಎಂಬ ನಾಮಾಂಕಿತವನ್ನು “ತಾಲ್ಲೂಕು ಪ್ರಜಾಸೌಧ” ಎಂಬುದಾಗಿಯೂ ಹಾಗೂ ‘ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡ’ ಎಂಬ ನಾಮಾಂಕಿತವನ್ನು “ಜಿಲ್ಲಾ ಪ್ರಜಾಸೌಧ” ಎಂಬುದಾಗಿ ಬದಲಾಯಿಸಿ ಆದೇಶಿಸಲಾಗಿದೆ.
ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಕಛೇರಿ ನಿರ್ಮಾಣ ಅತ್ಯಗತ್ಯವಾದರೂ ಸಹ, ಹಿಂದಿನ ವರ್ಷಗಳಲ್ಲಿ ಕೇವಲ 14 ಹೊಸ ತಾಲ್ಲೂಕುಗಳಿಗೆ ಮಾತ್ರ ಕಛೇರಿ ನಿರ್ಮಾಣ ಮಂಜೂರಿ ನೀಡಲಾಗಿತ್ತು. ಕಛೇರಿ ನಿರ್ಮಾಣದ ಅಗತ್ಯತೆಯನ್ನು ಮನಗೊಂಡ ನಮ್ಮ ಸರ್ಕಾರ ಕೇವಲ 2 ವರ್ಷದ ಅವಧಿಯಲ್ಲಿ ಹೊಸದಾಗಿ ಸೃಜಿಸಲಾದ 63 ತಾಲ್ಲೂಕುಗಳಲ್ಲಿ ಕಛೇರಿಗೆ ಮಂಜೂರಾಗದ 49 ತಾಲ್ಲೂಕುಗಳಿಗೂ ‘ಪ್ರಜಾಸೌಧ'ಗಳನ್ನು ಮಂಜೂರು ಮಾಡಿ, ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ದೃಢವಾದ ಹೆಜ್ಜೆ ಇಡಲಾಗಿದೆ. ಹೊಸ ತಾಲ್ಲೂಕುಗಳ ಸಕ್ರಿಯ ಕಾರ್ಯನಿರ್ವಹಣೆಗೆ ಮತ್ತು ಆ ತಾಲ್ಲೂಕುಗಳ ಜನರ ನಿರೀಕ್ಷೆಗಳನ್ನು ಈಡೇರಿಸಲು 49 ಬಾಕಿಯಿದ್ದ ತಾಲ್ಲೂಕುಗಳಿಗೂ ಪ್ರಜಾಸೌಧ ಮಂಜೂರು ಮಾಡಿರುವುದು ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ.
ಕಲಬುರಗಿ ಜಿಲ್ಲೆಯ ಕಾಳಗಿ, ಕಮಲಾಪುರ, ಯಡ್ರಾಮಿ, ಶಹಬಾದ್ ತಾಲೂಕುಗಳು, ಬೀದರ್ ಜಿಲ್ಲೆಯ ಚಿಟಗುಪ್ಪ, ಹುಲಸೂರು, ಕಮಲಾನಗರ ತಾಲೂಕುಗಳು, ಕೊಪ್ಪಳ ಜಿಲ್ಲೆಯ ಕುಕನೂರು, ಕನಕಗಿರಿ, ಕಾರಟಗಿ ತಾಲೂಕುಗಳು, ಯಾದಗಿರಿ ಜಿಲ್ಲೆಯ ವಡಗೆರಾ, ಗುರುಮಿಠಕಲ್, ಹುಣಸಗಿ ತಾಲೂಕುಗಳು, ರಾಯಚೂರು ಜಿಲ್ಲೆಯ ಮಸ್ಕಿ, ಸಿರವಾರ ತಾಲೂಕುಗಳು, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು, ಕೊಡಗು ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ ತಾಲೂಕುಗಳು, ಬೆಂಗಳೂರು ದಕ್ಷಿಣ ಹಾರೋಹಳ್ಳಿ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು, ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕು, ಮೈಸೂರು ಜಿಲ್ಲೆಯ ಸರಗೂರು ತಾಲೂಕು, ಬಾಗಲಕೋಟೆ ಜಿಲ್ಲೆಯ ಇಳಕಲ್, ಗದಗ ಜಿಲ್ಲೆಯ ಗಜೇಂದ್ರಗಡ, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕು, ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಕಳಸ ತಾಲೂಕುಗಳು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಮಂಚೇನಹಳ್ಳಿ ತಾಲೂಕು, ದಾವಣಗೆರೆ ಜಿಲ್ಲೆಯ ನ್ಯಾಮತಿ, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು, ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು, ರಾಯಚೂರು ಜಿಲ್ಲೆಯ ಅರಕೇರಾ ತಾಲೂಕು, ಬೆಳಗಾವಿ ಜಿಲ್ಲೆಯ ಮೂಡಲಗಿ, ಯರಗಟ್ಟಿ, ನಿಪ್ಪಾಣಿ ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ರಬಕವಿ-ಬನಹಟ್ಟಿ, ತೇರದಾಳ ತಾಲೂಕುಗಳು, ವಿಜಯಪುರ ಜಿಲ್ಲೆಯ ನಿಡಗುಂದಿ, ದೇವರಹಿಪ್ಪರಗಿ, ಚಡಚಣ, ಆಲಮೇಲ ತಾಲೂಕುಗಳು, ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಹುಬ್ಬಳ್ಳಿನಗರ ತಾಲೂಕುಗಳು, ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕು.
ಜಿಲ್ಲಾ ಪ್ರಜಾಸೌಧದ ಮಾಹಿತಿ:
ಬೀದರ್ ಜಿಲ್ಲಾ ಪ್ರಜಾಸೌಧವನ್ನು ರೂ. 48.32 ಕೋಟಿಗಳ ಮೊತ್ತದಲ್ಲಿ ನಿರ್ಮಿಸಲು ಹಾಗೂ ವಿಜಯಪುರ ಜಿಲ್ಲಾ ಪ್ರಜಾಸೌಧವನ್ನು ರೂ. 55.60 ಕೋಟಿಗಳ ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಕಳೆದ 02 ವರ್ಷಗಳಲ್ಲಿ ರಾಯಚೂರು ಜಿಲ್ಲೆ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಜಾಸೌಧ ಆಡಳಿತ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಪ್ರಜಾಸೌಧ, ಚಿಕ್ಕಮಗಳೂರು ಜಿಲ್ಲಾಡಳಿತ ಕೇಂದ್ರ ಕಟ್ಟಡದ ಮೊದಲನೇ ಹಂತಕ್ಕೆ ರೂ.3000.00 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡಂತೆ, ಸದರಿ ಕಟ್ಟಡದ ಇ.ಐ.ಆರ್.ಎಲ್/ವರ್ಕ್ ಸ್ಲಿಪ್ ಕಾಮಗಾರಿ ಹಾಗೂ 2ನೇ ಹಂತದ ಕಾಮಗಾರಿಯ ಅಂದಾಜು ಮೊತ್ತ ರೂ. 2648.11 ಲಕ್ಷಗಳು ಸೇರಿದಂತೆ ಕಾಮಗಾರಿಯ ಪರಿಷ್ಕøತ ಅಂದಾಜು ಮೊತ್ತ 5648.11 ಲಕ್ಷ ರೂ.ಗಳ ಲೋಕೋಪಯೋಗಿ ಇಲಾಖೆಯ ಪರಿಷ್ಕøತ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
2025ನೇ ಮೇ 30 ಮತ್ತು 31 ರಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಮಾವೇಶದಲ್ಲಿ ಈ 49 ಹೊಸ ತಾಲ್ಲೂಕು ಪ್ರಜಾಸೌಧ ಕಟ್ಟಡಗಳ ಮಂಜೂರಾತಿ ಪತ್ರಗಳನ್ನು ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ವಿತರಿಸಲಾಯಿತು.
Publisher: ಕನ್ನಡ ನಾಡು | Kannada Naadu