ಕನ್ನಡ ನಾಡು | Kannada Naadu

ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ಅವರಿಗೆ ಕೆಪಿಟಿಸಿಎಲ್‍ನ ಸಾಧಕ ಪ್ರಶಸ್ತಿ ಪ್ರದಾನ

30 May, 2025

 

ಬೆಂಗಳೂರು, ಮೇ 29, (ಕರ್ನಾಟಕ ವಾರ್ತೆ):
 
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕನ್ನಡ ಸಂಘವು ಕಳೆದ 30 ವರ್ಷಗಳಿಂದ ರಾಷ್ಟ್ರಕವಿ ಕುವೆಂಪು ಸೇರಿದಂತೆ ಬಹುತೇಕ ಜ್ಞಾನಪೀಠ ಪ್ರಶಸ್ತಿ ವಿಜೇತರು. ನಾಡೋಜ ಬರಗೂರು ರಾಮಚಂದ್ರಪ್ಪ, ಡಾ.ಸಿದ್ದರಾಮಯ್ಯ, ಬಿ.ಜಯಶ್ರೀಯಂತಹ ಸಾಹಿತ್ಯ ಹಾಗೂ ರಂಗಭೂಮಿ ದಿಗ್ಗಜರನ್ನು ಗೌರವಿಸಿರುವ ಸಂಘದಿಂದ ಪ್ರಸಕ್ತ ಸಾಲಿನ ಕನ್ನಡ ಸಂಭ್ರಮ-50ರ ನಿಮಿತ್ತ ರಂಗತಜ್ಞ, ಸಾಹಿತಿ ಹಾಗೂ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ಅವರು ಕಳೆದ 30 ವರ್ಷಗಳಿಂದ ಸಾಧಿಸಿರುವ ಕನ್ನಡ ಸೇವೆ, ಸಾಹಿತ್ಯ, ರಂಗಭೂಮಿ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಕೆಪಿಟಿಸಿಎಲ್‍ನ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಡಾ.ಎ.ಆರ್.ಗೋವಿಂದ ಸ್ವಾಮಿ ಅವರು ಕಳೆದ 20 ವರ್ಷಗಳಿಂದ ಕೆ.ಪಿ.ಟಿ.ಸಿ.ಎಲ್ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಮತ್ತು ಸಾಹಿತಿ ಚಂದ್ರ ಶೇಖರ ಕಂಬಾರ, ಇತಿಹಾಸಕಾರ ಡಾ.ಹೆಚ್.ಸಿ.ಗೋಪಾಲರಾವ್ ನಿರ್ವಹಿಸಿದ ಕೆ.ಪಿ.ಟಿ.ಸಿ.ಎಲ್ ಕನ್ನಡ ಘಟಕದ ಸಮಗ್ರ ನಾಯಕ ಹುದ್ದೆ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ.
 
ಸಮಾರಂಭದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ ಕುಮಾರ ಪಾಂಡೆ, ಕನ್ನಡ ಸಂಘದ ಅಧ್ಯಕ್ಷ ಎಸ್.ವಿ.ಮಂಜುನಾಥ್ ಇತರೆ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by