ಕನ್ನಡ ನಾಡು | Kannada Naadu

ವಿಶ್ವ ಪರಿಸರ ದಿನಾಚರಣೆ 2025 ರ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆ

28 May, 2025

ಬೆಂಗಳೂರು  : ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜೂನ್ 5, 2025 ರಂದು ವಿಶ್ವ ಪರಿಸರ ದಿನವನ್ನು  ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿ, ಗೇಟ್ ನಂ.02ರಲ್ಲಿ ರಾಜ್ಯಮಟ್ಟದ ಪರಿಸರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಅಂತ್ಯಗೊಳಿಸೋಣ (Ending Plastic Pollution)  ಎಂಬ ವಿಷಯವಾಗಿ ದಿನಾಂಕ 2025 ಜೂನ್ 3 ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಕಬ್ಬನ್ ಪಾರ್ಕ್ ಬಾಲಭವನದ ಆವರಣದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲೀμïನಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗೆ ಶಾಲಾ ಮಕ್ಕಳು ಭಾಗವಹಿಸಬಹುದಾಗಿದೆ.  

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವiಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಬೆಳಿಗ್ಗೆ  10.00 ರಿಂದ 11.30 ರವರೆಗೆ ಹಾಗೂ ಪ್ರೌಢಶಾಲಾ ವiಕ್ಕಳಿಗೆ ಮಧ್ಯಾಹ್ನ 12.00ರಿಂದ 01.00 ರವರೆಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

“ಪ್ಲಾಸ್ಟಿಕ್ ಬಳಕೆಯನ್ನು ಅಂತ್ಯಗೊಳಿಸೋಣ” ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ಪರ್ಧೆಗೆ ಬರತಕ್ಕದ್ದು.

ಭಾಗವಹಿಸುವ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಹಾಳೆಗಳು ಮತ್ತು ಪ್ರಬಂಧ ಬರೆಯುವ ಹಾಳೆಗಳನ್ನು ಮಂಡಳಿಯವತಿಯಿಂದ ನೀಡಲಾಗುವುದು. ಚಿತ್ರಕಲೆಗೆ ಬಳಸುವ ಪೆನ್ಸಿಲ್, ಬಣ್ಣಗಳು (ಪೇಂಟಿಂಗ್ ಸಾಮಗ್ರಿಗಳು) ಇತ್ಯಾದಿ ಸಾಮಗ್ರಿಗಳು ಭಾಗವಹಿಸುವ ವiಕ್ಕಳೇ ತರಬೇಕು.

ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳು ಸ್ಪರ್ಧೆಯ ಅರ್ಧಗಂಟೆ ಮುಂಚಿತವಾಗಿ ಬಾಲ ಭವನ ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಹಾಜರಾಗಿರಬೇಕು. ಸ್ಪರ್ಧೆಗಳ ನಂತರ ಚಿತ್ರಕಲೆ ಮಾಡಿರುವ ಹಾಳೆಗಳು ಮತ್ತು ಪ್ರಬಂಧ ಬರೆದಿರುವ ಹಾಳೆಗಳು ಮಂಡಳಿಗೆ ನೀಡತಕ್ಕದ್ದು. ಬಹುಮಾನ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದು, ತೀರ್ಪುಗಾರರು ನೀಡುವ ತೀರ್ಮಾನವೆ ಅಂತಿಮವಾಗಿರುತ್ತದೆ.

ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾದಾನಕರ ಬಹುಮಾನಗಳನ್ನು ಪ್ರತಿ ವಿಭಾಗದ ವಿಜೇತರಿಗೆ 2025 ಜೂನ್ 5 ರಂದು ಗುರುವಾರ 11.00 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ, ಗೇಟ್ ನಂ.2, ಇಲ್ಲಿ ನಡೆಯಲಿರುವ ವಿಶ್ವಪರಿಸರ ದಿನಾಚಾರಣೆ-2025 ರಂದು ಗಣ್ಯರಿಂದ ವಿತರಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಲಘು ಉಪಹಾರವನ್ನು ಸ್ಪರ್ಧೆಯ ನಂತರ ನೀಡಲಾಗುವುದು.

ನೋಂದಣಿ ಹಾಗೂ ಹೆಚ್ಚಿನ ವಿವಿರಗಳಿಗಾಗಿ, ಮಂಡಳಿಯ ಪ್ರಾದೇಶಿಕ ಕಛೇರಿ ಬೆಂಗಳೂರು ನಗರ ದಕ್ಷಿಣ, 1 ನೇ ಮಹಡಿ, ನಿಸರ್ಗ ಭವನ, 7ನೇ ‘ಡಿ’ ಕ್ರಾಸ್, ಶಿವನಗರ, ಬೆಂಗಳೂರು - 560010 ಅಥವಾ ಇ-ಮೇಲ್ ವಿಳಾಸ  bngcitysouth@kspcb.gov.in ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by