ಕನ್ನಡ ನಾಡು | Kannada Naadu

ಭದ್ರತಾಪಡೆಗಳಿಂದ ಎನ್ ಕೌಂಟರ್ ಕಾರ್ಯಾಚರಣೆ: 26 ನಕ್ಸಲರ ಹತ್ಯೆ

21 May, 2025

ಛತ್ತೀಸ್ ಗಢ :  ಭದ್ರತಾಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿರುವ ಘಟನೆ ಛತ್ತೀಸ್ ಗಢದ ನಾರಾಯನಪುರದಲ್ಲಿ ನಡೆದಿದೆ.

ನಕ್ಸಲರ ವಿರುದ್ಧ ಭದ್ರತಾಪಡೆಗಳು ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ 26 ನಕ್ಸಲರು ಹತ್ಯೆಯಾಗಿದ್ದಾರೆ.

ನಾರಾಯಣಪುರ, ದಾಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಡಿಅರ್ ಜಿ ಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಅಬುಜ್ಬದ್ ನ ಪ್ರದೇಶದಲ್ಲಿ ಮಾವೋವಾದಿ ನಾಯಕ ಅಡಗಿರುವ ಬಗ್ಗೆ ಭದ್ರತಾಪಡೆಗಳಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾಪಡೆಗಳು . ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ಬಸವರಾಜು ಹತ್ಯೆಯಾಗಿದ್ದಾನೆ. ಒಟ್ಟು 26 ನಕ್ಸಲರು ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by