ಕನ್ನಡ ನಾಡು | Kannada Naadu

ಜಾರ್ಖಂಡ್‍ನ ಬೂತ್ ಮಟ್ಟದ ಮೇಲ್ವಿಚಾರಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

20 May, 2025

 

ಬೆಂಗಳೂರು : ಭಾರತ ಚುನಾವಣಾ ಆಯೋಗದಿಂದ ಇಂದು ನವದೆಹಲಿಯ ಇಂಡಿಯಾ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್‍ಮೆಂಟ್ (ಐಐಐಡಿಇಎಂ)ನಲ್ಲಿ ಹಮ್ಮಿಕೊಳ್ಳಲಾದ ಜಾರ್ಖಂಡ್‍ನ ಬೂತ್ ಮಟ್ಟದ ಮೇಲ್ವಿಚಾರಕರ ತರಬೇತಿ ಕಾರ್ಯಗಾರವನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು, ಈ ಎರಡು ದಿನಗಳ ಕಾರ್ಯಾಗಾರದಲ್ಲಿ  ಜಾರ್ಖಂಡ್‍ನಿಂದ ಡಿಇಒಎಸ್, ಇಆರ್‍ಒಎಸ್, ಬಿಎಲ್‍ಒಗಳು ಮತ್ತು ಬಿಎಲ್‍ಒ ಮೇಲ್ವಿಚಾರಕರು ಸೇರಿದಂತೆ ಸುಮಾರು 402 ಅಧಿಕಾರಿಗಳು ಭಾಗವಹಿಸಿದ್ದರು. ಕಳೆದ ಮೂರು ತಿಂಗಳುಗಳಲ್ಲಿ, ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ 3000 ಕ್ಕೂ ಹೆಚ್ಚು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಹಾಗೂ ಜಾಖರ್ಂಡ್‍ನಲ್ಲಿ ಮತದಾರರ ನೋಂದಣಿಯ ಸಮಯದಲ್ಲಿ ಅಧಿಕಾರಿಗಳು ತಳಮಟ್ಟದಲ್ಲಿ ತೋರಿದ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

1950 ರ ಆರ್‍ಪಿ ಕಾಯ್ದೆಯ ಸೆಕ್ಷನ್ 24 (ಎ) ಮತ್ತು 24 (ಬಿ) ಅಡಿಯಲ್ಲಿ ಮೊದಲ ಮತ್ತು ಎರಡನೇ ಮೇಲ್ಮನವಿಗಳ ನಿಬಂಧನೆಗಳೊಂದಿಗೆ ಮತದಾರರಿಗೆ ಪರಿಚಿತರಾಗುವಂತೆ ಭಾಗವಹಿಸುವವರನ್ನು ಅವರು ಪೆÇ್ರೀತ್ಸಾಹಿಸಿದರು.

ಅಂತಿಮ ಮತದಾರರ ಪಟ್ಟಿಯ ವಿರುದ್ಧ ಮೊದಲ ಮತ್ತು ಎರಡನೇ ಮೇಲ್ಮನವಿಗಳನ್ನು ಕ್ರಮವಾಗಿ ಡಿಎಂ/ಜಿಲ್ಲಾಧಿಕಾರಿ/ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿ ಅವರಿಗೆ ಸಲ್ಲಿಸಬಹುದು ಎಂಬುದನ್ನು ನೆನಪಿಸಿಕೊಳ್ಳಬಹುದು. ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‍ಎಸ್‍ಆರ್) ಕಾರ್ಯವು 2025 ನೇ ಜನವರಿ 6 ರಿಂದ 10 ರವರೆಗೆ ಪೂರ್ಣಗೊಂಡ ನಂತರ ಜಾಖರ್ಂಡ್‍ನಿಂದ ಯಾವುದೇ ಮೇಲ್ಮನವಿಗಳು ದಾಖಲಾಗಿಲ್ಲ ಎಂದು ತಿಳಿಸಿದರು.

ಸರಿಯಾದ ಮತ್ತು ನವೀಕರಿಸಿದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ, ಭಾಗವಹಿಸುವವರಿಗೆ ಜನತಾ ಪ್ರಾತಿನಿಧ್ಯ ಕಾಯ್ದೆ 1950, 1951, ಮತದಾರರ ನೋಂದಣಿ ನಿಯಮಗಳು 1960, ಚುನಾವಣಾ ನಿಯಮಗಳು 1961 ಮತ್ತು ಕಾಲಕಾಲಕ್ಕೆ ಭಾರತೀಯ ಚುನಾವಣಾ ಆಯೋಗವು ಹೊರಡಿಸಿದ ಸೂಚನೆಗಳ ಪ್ರಕಾರ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಲಾಗುತ್ತಿದೆ.

ಕಾರ್ಯಕ್ರಮದ ಪಠ್ಯಕ್ರಮವು ಸಂವಾದಾತ್ಮಕ ಅವಧಿಗಳು, ಪಾತ್ರಾಭಿನಯಗಳು, ಮನೆ-ಮನೆ ಸಮೀಕ್ಷೆಗಳನ್ನು ಅನುಕರಿಸುವುದು, ಪ್ರಕರಣ ಅಧ್ಯಯನಗಳು ಮತ್ತು ಫಾರ್ಮ್ 6, 7 ಮತ್ತು 8 ಅನ್ನು ಭರ್ತಿ ಮಾಡಲು ಪ್ರಾಯೋಗಿಕ ವ್ಯಾಯಾಮಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಭಾಗವಹಿಸುವವರು ಮತದಾರರ ಸಹಾಯವಾಣಿ ಅಪ್ಲಿಕೇಶನ್ (ವಿಎಚ್‍ಎ) ಮತ್ತು ಐಟಿ ಪರಿಕರಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ಪಡೆಯುತ್ತಾರೆ. ತರಬೇತಿ ಪಡೆಯುವವರಿಗೆ ಅಣಕು ಮತದಾನ ನಡೆಸುವುದು ಸೇರಿದಂತೆ ಇವಿಎಂಗಳು ಮತ್ತು ವಿವಿಪ್ಯಾಟ್‍ಗಳ ತಾಂತ್ರಿಕ ಪ್ರದರ್ಶನಗಳು ಮತ್ತು ತರಬೇತಿಯನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by