ಡಾ. ಬಿ.ಆರ್. ಅಂಬೇಡ್ಕರ್ ಅವರ 133 ಮತ್ತು ಡಾ. ಬಾಬು ಜಗಜೀವನ್ ರಾಂ ಅವರ 116 ನೇ ಜಯಂತೋತ್ಸವ
24 Oct, 2024
ದಿ ಬೆಂಗಳೂರು ವಾಟರ್ ಸಪ್ಲೈ ಮತ್ತು ಸುಯರೇಜ್ ಬೋರ್ಡ್ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ನಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 133 ಮತ್ತು ಡಾ. ಬಾಬು ಜಗಜೀವನ್ ರಾಂ ಅವರ 116 ನೇ ಜಯಂತೋತ್ಸವ

ಬೆಂಗಳೂರು, : ಜಲಮಂಡಳಿ ಸಿಬ್ಬಂದಿ ನಗರದ ಜನರಿಗೆ ನೀರು ಪೂರೈಸಲು ಹಗಲಿರುಳು ಸೇನಾನಿಗಳಂತೆ ಕೆಲಸ ಮಾಡುತ್ತಿದ್ದು, ಅವರ ಹಿತರಕ್ಷಣೆಗೆ ಒತ್ತು ನೀಡಲಾಗಿದೆ. ನೌಕರರಷ್ಟೇ ಅಲ್ಲದೇ ಇಡೀ ಕುಟುಂಬಕ್ಕೆ ಭದ್ರತೆ ಒದಗಿಸಲಾಗುವುದು. ಜಲ ಮಂಡಳಿ ಹಿತ ಎತ್ತಿ ಹಿಡಿಯುವ ನೌಕರರ ರಕ್ಷಣೆ ತಮ್ಮದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಬೆಂಗಳೂರು ಜಲಮಂಡಳಿ ಸಭಾಂಗಣದಲ್ಲಿ ದಿ ಬೆಂಗಳೂರು ವಾಟರ್ ಸಪ್ಲೈ ಮತ್ತು ಸುಯರೇಜ್ ಬೋರ್ಡ್ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ನಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 133 ಮತ್ತು ಡಾ. ಬಾಬು ಜಗಜೀವನ್ ರಾಂ ಅವರ 116 ನೇ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನಗರಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲಾ ಹಂತದ ಸಿಬ್ಬಂದಿಗಳು ಹಗಲಿರುಳು ಕಾರ್ಯನಿರ್ವಹಿಸಿದ್ದಾರೆ. ಅದರಲ್ಲೂ ನಗರದ ಸ್ವಚ್ಚತೆಯನ್ನು ಕಾಪಾಡಿ, ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸ್ಯಾನಿಟರಿ ಸಿಬ್ಬಂದಿಗಳ ಕಾರ್ಯ ಪ್ರಮುಖವಾಗಿದೆ. ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ನಗರದ ಸ್ವಚ್ಚತೆಯನ್ನು ಕಾಪಾಡುತ್ತಿದ್ದಾರೆ. ಇವರ ಹಿತರಕ್ಷಣೆಗೆ ಒತ್ತು ನೀಡಲಾಗಿದೆ. ನೌಕರರಷ್ಟೇ ಅಲ್ಲದೇ ಇಡೀ ಕುಟುಂಬಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಜಲಮಂಡಳಿಯ ಹಿತ ಎತ್ತಿ ಹಿಡಿಯುತ್ತಿರುವ ನೌಕರರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಯಾವುದೇ ವೃತ್ತಿಯಲ್ಲಿದ್ದರೂ, ಆ ಕಾರ್ಮಿಕರಿಗೆ ವೃತ್ತಿಯ ಘನತೆ ಮತ್ತು ಗೌರವ ಅತ್ಯಂತ ಅಗತ್ಯವಾಗಿದೆ. ಯಾವುದೇ ಜಾತಿ ಬೇಧ ಇಲ್ಲದೇ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಆಸ್ತಿ ಮಾಡುವುದಕ್ಕಿಂತ ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಸಂಪತ್ ರಾಜ್ ಮಾತನಾಡಿ, ನೀರಿಗಾಗಿ ಕೊಳಗೇರಿ ಜನ ಪರಿತಪಿಸುತ್ತಿದ್ದು, ಕಲುಷಿತ ನೀರಿನ ಸಮಸ್ಯೆಗಳು ತೀವ್ರಗೊಂಡಿವೆ. ಮುಂಬೈನ ಧಾರಾವಿ ಕೊಳಗೇರಿಯಂತೆ ಸಗಾಯ್ ಪುರಂ, ಡಿ.ಜೆ. ಹಳ್ಳಿ ಮತ್ತಿತರೆ ಭಾಗಗಳಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಪ್ರತ್ಯೇಕ ಘಟಕ ತೆರೆದರೆ ತಕ್ಣಣವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ತಾವು ಪಾಲಿಕೆ ಸದಸ್ಯರಾಗಿದ್ದಾಗ ಡಿ.ಜಿ.ಹಳ್ಳಿಯಲ್ಲಿ ಒಂದೇ ಒಂದು ಕೊಳವೆ ಬಾವಿ ಮಾತ್ರ ಇತ್ತು. ಅದನ್ನು ಬಸವಲಿಂಗಪ್ಪ ಶಾಸಕರಾಗಿದ್ದಾಗ ಕೊರೆಸಿದ್ದರು. ತಾವು ಪಾಲಿಕೆ ಸದಸ್ಯರಾದ ತರುವಾಯ ನೂರಾರು ಕೊಳವೆ ಬಾವಿಗಳನ್ನು ಕೊರೆಸಿದ ಜೊತೆಗೆ ಜಲಮಂಡಳಿಯಿಂದ ಸಾಕಷ್ಟು ಕೆಲಸ ಮಾಡಿಸಿದ್ದೇ. ಇದೀಗ ದಿನ ಬಿಟ್ಟು ಬಿಟ್ಟು ನೀರು ಪೂರೈಕೆಯಾಗುತ್ತಿದೆ. ಜಲ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಉತ್ತಮ ಕೆಲಸಗಳಿಗೆ ಸದಾ ಬೆಂಬಲ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಬಿ. ಸುರೇಶ್, ಮುಖ್ಯ ಆಡಳಿತಾಧಿಕಾರಿ ಸಿ. ಮದನ ಮೋಹನ, ಆರ್ಥಿಕ ಸಲಹೆಗಾರ ಜಿ.ಎಸ್. ಸುಬ್ಬರಾಮಯ್ಯ, ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷರಾದ ಬಿ.ಕೆ ಮರಿಯಪ್ಪ, ಪರಿಶಿಷ್ಟ ಜಾತಿ/ಪಂಗಡ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸದಾಶಿವ ಕಾಂಬಳೆ, ದಿ ಬೆಂಗಳೂರು ವಾಟರ್ ಸಪ್ಲೈ ಮತ್ತು ಸುಯರೇಜ್ ಬೋರ್ಡ್ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಸಿದ್ದಪ್ಪ, ಉಪಾಧ್ಯಕ್ಷರಾದ ಓಬಳೇಶ್, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಸ್ಯಾನಿಟರಿ ಯೂನಿಯನ್ ವರ್ಕರ್ಸ್ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu