ಬೆಂಗಳೂರಿನ ರಸ್ತೆಗಳಲ್ಲಿ 180 ಅಪಾಯಕಾರಿ ಸ್ಥಳಗಳು: ಈ ಕುರಿತು ವರದಿ ನೀಡಿದ ಪೊಲೀಸರು.
16 Aug, 2024
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಅಧ್ವಾನವಾಗಿಬಿಟ್ಟಿವೆ. ಇಲ್ಲಿನ ಬಹುತೆಕ ರಸ್ತೆಗಳು ದಿನದಿಂದ ದಿನಕ್ಕೆ ಸ್ಥಿತಿ ಹದಗೆಟ್ಟು ಹೋಗುತ್ತಿದೆ. ಇತ್ತೀಚಿಕೆ ಹೊಸದಾಗಿ ಮಿರ್ಮಾಣ ಮಾಡಲಾಗಿರುವ ರಸ್ತೆಗಳು ಸಹ ಗುಂಡಿ ಬಿದ್ದು ಅಪಘಾತಕ್ಕೆ ಆಹ್ವಾನ ನಡುತ್ತಿವೆ.
ಕಳೆದ ಎರಡು ದಿನ ರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ನೀರಿನಿಂದ ತುಂಬಿ ಹೋಗಿವೆ. ತಗ್ಗು ಪ್ರದೇಶಗಳ ಸ್ಥಿತಿ ಹೇಳ ತೀರದ್ದಾಗಿದೆ. ಇನ್ನೂ ರಸ್ತೆಗಳಲ್ಲಿ ಮಳೆ ನೀರು ತುಂಬಿ ಗುಂಡಿಗಳು ಕಾಣದೆ ವಾಹನ ಸವಾರರು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಗರಗಳಲ್ಲಿ 180 ಅಪಾಯಕಾರಿ ರಸ್ತೆಗಳು ಇರುವ ಬಗ್ಗೆ ಬಿಬಿಎಂಪಿಗೆ ಪೊಲೀಸರು ವರದಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅಧಿಕ ಮಳೆಯಾದರೆ ಸಾಕು ರಸ್ತೆಗಳು, ಅಂಡರ್ ಪಾಸ್ಗಳು ಜಲಾವೃತವಾಗುವುದು ಮಾಮೂಲು. ಮಳೆಗೆ ಮರ ಹಾಗೂ ವಿದ್ಯುತ್ ಕಂಬ ಉರುಳುವುದು ಮಾತ್ರವಲ್ಲದೆ, ನಗರದಲ್ಲಿ ಕೆಲ ಅಪಾಯಕಾರಿ ರಸ್ತೆಗಳನ್ನು ಪತ್ತೆ ಮಾಡಲಾಗಿದೆ. ನಗರದಲ್ಲಿ ಮಳೆ ಬಂದಾಗಲೆಲ್ಲಾ ಸಮಸ್ಯೆ ಸೃಷ್ಟಿಯಾಗುವ ಸ್ಥಳಗಳ ಬಗ್ಗೆ ವರದಿ ತಯಾರಿಸಿ ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ನೀಡಿದ್ದಾರೆ. ಈ ವೇಳೆ 180 ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ಮಳೆ ಬಂದಾಗ ಆಗುವ ಅವಾಂತರಗಳನ್ನು ಫೋಟೋ ಸಮೇತ ಬಿಬಿಎಂಪಿಗೆ ಸಚಿತ್ರ ವರದಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ.

ಮಳೆ ಬಂದಾಗ ರಸ್ತೆಗಳಲ್ಲಿರುವ ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದಾಗ ಮೊದಲು ಸಹಾಯಕ್ಕೆ ಬರುವುದೇ ಪೊಲೀಸರು. ಹೀಗಾಗಿ ಬಿಬಿಎಂಪಿಗೆ ತಿಳಿಯದ ಅಪಾಯಕಾರಿ ಸ್ಥಳಗಳ ಬಗ್ಗೆ ಪೊಲೀಸರಿಗೆ ಹೆಚ್ಚಾಗಿ ತಿಳಿದಿರುತ್ತದೆ. ಇದರಿಂದಾಗಿ ಆ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡಿ ಪೊಲೀಸರು ಬಿಬಿಎಂಪಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 'ಸದ್ಯ ಮಳೆ ಅವಾಂತರಗಳ ಬಗ್ಗೆ ಪೊಲೀಸರು ಕೊಟ್ಟಿದ್ದ ಜಾಗಗಳ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮಳೆ ಬಂದಾಗ ಉಂಟಾಗುವ ಸಮಸ್ಯೆಗಳಿರುವ ಜಾಗಗಳನ್ನು ಅವರು ಗುರುತಿಸಿ ಪಟ್ಟಿ ಮಾಡಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಹೊರಟಿರುವ ಪಾಲಿಕೆ ಕೆಲವೆಡೆ ಕೆಲಸ ಆರಂಭಿಸಿದೆ' ಎಂದರು.
ನಿಯಮದ ಪ್ರಕಾರ ಬೆಂಗಳೂರಿನಲ್ಲಿ ಅಪಾಯಕಾರಿ ಸ್ಥಳಗಳ ಬಗ್ಗೆ ಬಿಬಿಎಂಪಿ ಗಮನ ಹರಿಸಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಮಳೆ ಬಂದಾಗ ನಿದ್ದೆಗೆ ಜಾರಿರುತ್ತಾರೆ. ಹೀಗಾಗಿ ಟ್ರಾಫಿಕ್ ಪೊಲೀಸರೇ ಡೆಡ್ಲಿ ಸ್ಪಾಟ್ಗಳ ಬಗ್ಗೆ ಪಟ್ಟಿ ಮಾಡಿ ವರದಿ ನೀಡಿದೆ. ಈಗಲಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ ಕಾದು ನೊಡಬೇಕಿದೆ.
Publisher: ಕನ್ನಡ ನಾಡು | Kannada Naadu