ಕನ್ನಡ ನಾಡು | Kannada Naadu

ಡ್ರಗ್ಸ್ ವಿರುದ್ಧ ಬೆಂಗಳೂರು ಪೊಲೀಸ್‌ರ ಸಮರ ; ಸಿಂಥೆಟಿಕ್ ಡ್ರಗ್ಸ್ ಪತ್ತೆಗೆ ಪರಿಣಿತ ವಿಶೇಷ ಶ್ವಾನದಳದ

25 Jun, 2024

ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಲಾವಣೆ ಹೆಚ್ಚಾಗುತ್ತಿದೆ. ತರಹೇವಾರಿ ಮಾದಕ ವಸ್ತುಗಳ ವಹಿವಾಟು ಮತ್ತು ಬಳಕೆ ಬೆಂಗಳೂರು ನರದಲ್ಲಿ ನಿತ್ಯನಿರಂತರವಾಗಿ ಬಿಟ್ಟಿದ. ಎನ್‌ಡಿಪಿಎಸ್‌ ಕಾಯ್ದೆಯನ್ನು ಅರ್ಥಪೂರ್ಣವಾಗಿ ಜಾರಿ ತರುವುದಕ್ಕೆ ಬೆಂಗಳೂರು ಪೊಲೀಸ್‌ರು ನಿತ್ಯ ನೂತನ ಕ್ರಮಗಳನ್ನು ಅಳವಡಿಸುತ್ತಲೇ ಬಂದಿದ್ದಾರೆ. ಶ್ವಾನದಳದವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಅಕ್ರಮವಾಗಿ ನಡೆಯುತ್ತಿರುವ ನಿಷೇಧಿತ ಮಾದಕ ವಸ್ತುಗಳ ವ್ಯವಹಾರವನ್ನು ಬುಡಸಹಿತ ಕಿತ್ತುಹಾಕಲು ಯೋಜನೆ ರೂಪಿಸಿದ್ದಾರೆ.  


ಬೆಂಗಳೂರು ನಗರದಲ್ಲಿ ಮಾದಕವಸ್ತುಗಳ ಪತ್ತೆ, ಸಾಗಣೆ ಪತ್ತೆ ಹಚ್ಚಲು ಪೊಲೀಸರು ನಿರಂತರ ಒಂದಿಲ್ಲ ಒಂದು ಹೊಸದಾದ ಕ್ರಮ ಕೈಗೊಂಡಿರುತ್ತಾರೆ. ಅದಕ್ಕಾಗಿಯೇ ಈಗ 5 ನಾಯಿಗಳಿಗೆ ವಿಶೇಷ ತರಬೇತಿಯನ್ನು ಕೊಡಿಸುವ ಮೂಲಕ ಅವುಗಳನ್ನು ತಮ್ಮ ಸೇವೆಗೆ ಸಜ್ಜುಗೊಳಿಸಲಾಗಿದೆ. ದಿನದಿಂದ ದಿನಕ್ಕೆ ಮಾದಕವಸ್ತು ಕಳ್ಳಸಾಗಣೆಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಆದ್ದರಿಂದ ಆಧುನಿಕ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಹಲವು ಸವಾಲುಗಳಿವೆ. ಇದಕ್ಕಾಗಿ ಶ್ವಾನದಳವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.


  ಈಗ ಬೆಂಗಳೂರು ನಗರದ ಪೊಲೀಸರು ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ವಿವಿಧ ಹೊಸ ಮಾದರಿಯ ಮಾದಕವಸ್ತು ಪತ್ತೆ ಹಚ್ಚಲು ಶ್ವಾನದಳದ 5 ನಾಯಿಗಳಿಗೆ ವಿಶೇಷ ತರಬೇತಿಯನ್ನು ಕೊಡಿಸಿದ್ದಾರೆ. ನಗರದಲ್ಲಿ ನಡೆಯುವ ದಾಳಿಗಳಲ್ಲಿ ಈ ನಾಯಿಗಳನ್ನು ಮಾದಕವಸ್ತು ಪತ್ತೆ ಹಚ್ಚಲು ಬಳಕೆ ಮಾಡಲಾಗುತ್ತದೆ.


    ಬೆಂಗಳೂರು ನಗರ ಪೊಲೀಸರ ಶ್ವಾನದಳದಲ್ಲಿ ತರಬೇತಿ ಪಡೆದ ಶ್ವಾನಗಳಿವೆ. ಇವುಗಳು ಸಾಂಪ್ರದಾಯಿಕ ಮಾದಕವಸ್ತುಗಳಾದ ಗಾಂಜಾ, ಚರಸ್ ಮುಂತಾದವುಗಳನ್ನು ಪತ್ತೆ ಮಾಡುತ್ತವೆ. ಆದರೆ ಆಧುನಿಕ ಮಾದಕವಸ್ತುಗಳನ್ನು ಪತ್ತೆ ಮಾಡಲು ಈಗ ಶ್ವಾನದಳದ ಆಯ್ದ 5 ನಾಯಿಗಳಿಗೆ ವಿಶೇಷ ತರಬೇತಿ ಕೊಡಿಸಲಾಗಿದೆ.
   ಕೆಲವು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಹೀಗೆ ತರಬೇತಿ ಪಡೆದ ಶ್ವಾನಗಳನ್ನು ಬಳಕೆ ಮಾಡಿಕೊಂಡು ಅಲ್ಲಿ ಮಾದಕವಸ್ತುಗಳನ್ನು ಬಳಕೆ ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ. ರಾಜ್ಯಗಳಲ್ಲಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ ಇದೆ. ಸ್ಥಳೀಯ ಪೊಲೀಸರು ಇದನ್ನು ನಿರ್ವಹಣೆ ಮಾಡುತ್ತಾರೆ. ಬೆಂಗಳೂರು ನಗರ ಪೊಲೀಸರು ಹೊಸದಾಗಿ ಶ್ವಾನದಳಕ್ಕೆ ಸೇರುವ ಎಲ್ಲಾ ನಾಯಿಗಳಿಗೆ ಆಧುನಿಕ ಮಾದಕವಸ್ತುಗಳನ್ನು ಪತ್ತೆ ಮಾಡುವ ತರಬೇತಿ ನೀಡಲು ಮುಂದಾಗಿದ್ದಾರೆ.  
   

ವಿಶೇಷ ತರಬೇತಿ ಪಡೆದ 5 ಶ್ವಾನಗಳ ಪೈಕಿ 4 ಜರ್ಮನ್ ಶಫರ್ಡ್ ಮತ್ತೊಂದು ಬೀಗಲ್ ತಳಿಯವು. ಬೇರೆ ಬೇರೆ ಮಾದರಿಗಳ ಮೂಲಕ ತರಬೇತುದಾರರು ಈ ನಾಯಿಗಳಿಗೆ ಅಗತ್ಯ ತರಬೇತಿಯನ್ನು ನೀಡಿದ್ದು, 10 ಬಗೆಯ ಮಾದಕ ವಸ್ತುಗಳನ್ನು ಇವು ವಾಸನೆ ಮೂಲಕ ಪತ್ತೆ ಹಚ್ಚಲಿವೆ. ಈ ನಾಯಿಗಳಿಗೆ ಮೊದಲ ಹಂತದಲ್ಲಿ ಮಾದಕ ವಸ್ತು ಪತ್ತೆ ಹಚ್ಚುವ ತರಬೇತಿ ನೀಡಲಾಯಿತು. ಬಳಿಕ ಲಗೇಜ್, ಬ್ಯಾಗ್, ಮನುಷ್ಯರು, ವಾಹನ, ಕಟ್ಟಡ ಹೀಗೆ ವಿವಿಧ ಕಡೆ ಸಂಗ್ರಹವಾಗಿರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ತರಬೇತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಅವುಗಳನ್ನು ಪತ್ತೆ ಹಚ್ಚಲು ನಾಯಿಗಳಿಗೆ ಸೂಚನೆ ನೀಡಲಾಗುತ್ತದೆ. ವಸ್ತು ಪತ್ತೆಯಾದರೆ ಕೆಲವು ನಾಯಿಗಳು ಬಾಲ ಅಲ್ಲಾಡಿಸುವ ಮೂಲಕ ಸೂಚನೆ ನೀಡುತ್ತವೆ. ಕೆಲವು ಬೊಗಳುತ್ತವೆ ಎಂದು ತರಬೇತುದಾರರು ತಿಳಿಸಿದ್ದಾರೆ.


 , ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಮಣ್ ಗುಪ್ತಅವರು ಮಾತನಾಡಿ, "ಸಾಂಪ್ರದಾಯಿಕ ಡ್ರಗ್ಸ್‌ಗಳನ್ನು ಪತ್ತೆ ಹಚ್ಚುವ ತರಬೇತಿಯನ್ನು ಪಡೆದ ಹಲವು ಶ್ವಾನಗಳು ದಳದಲ್ಲಿವೆ. ಈಗ ನಗರದ ಅನೇಕ ಪಾರ್ಟಿಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಬಳಕೆ ಮಾಡಲಾಗುತ್ತದೆ. ಇಂಥಹ ಕೃತ್ಯವನ್ನು ತಡೆಯುವುದರ ಜೊತೆ ಬೇರು ಸಹಿತ ಕಿತ್ತು ಹಾಕಬೇಕಿದೆ. ಅದಕ್ಕೆ ಪೊಲೀಸ್‌ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಆದರೂ ನಮ್ಮವರ ಕಣ್ಣುತ್ತಪ್ಪಿಸಿ ಅಪರಧ ಕೃತ್ಯ ನಡೆಸುತ್ತಲೇ ಇರುತ್ತಾರೆ. ಅದಕ್ಕೆ ಈಗ ತರಬೇತಿ ಪಡೆದ ಶ್ವಾನಗಳು ನೂತನ ಮಾದರಿಯ ಡ್ರಗ್ಸ್ ಪತ್ತೆ ಹಚ್ಚಲಿವೆ" ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by